ಜೈವಿಕ ಕ್ರಿಯಾ ಪ್ರಾಜೆಕ್ಟನ ಪ್ರದರ್ಶನ

ಶುದ್ಧ ಚಿನ್ನದ ಅದಿರು ದೊರೆಯುವುದು ಕಡಿಮೆಯಾದ ಪ್ರಯುಕ್ತ ರಿಫ್ರ್ಯಾಕ್ಟರಿ ಅದಿರಿನಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಪಡೆಯಲು ಕೇಂದ್ರ ಸರಕಾರದ ಜೈವಿಕ ತಾಂತ್ರಿಕತೆಯ ಇಲಾಖೆಯ ಸಹಕಾರ/ಸಹಭಾಗಿತ್ವದೊಂದಿಗೆ ಪ್ರದರ್ಶನ ಜೈವಿಕ ಪ್ರತಿಕ್ರಿಯಾ ಯಂತ್ರವನ್ನು ಸ್ಥಾಪಿಸಲಾಗಿದೆ.

ರಿಫ್ರ್ಯಾಕ್ಟರಿ ಅದಿರನ್ನು ಸಾಂದ್ರೀಕೃತ ಕರಗಿಸುವ ವಿಧಾನ ಅನುಸರಿಸಲು ಇರುವ ಅವಕಾಶಗಳು ಕಡಿಮೆಯಾದ ಕಾರಣ, ಜೈವಿಕ ಸವಕಳಿಯಂತಹ ಬದಲೀ ಮಾರ್ಗವನ್ನು ಅನುಸರಿಸುವುದನ್ನು ಬೆಂಬತ್ತಬೇಕಾಗಿದೆ.

ಭಾರತದಲ್ಲೇ ಮೊದಲನೆಯದೆನ್ನಬಹುದಾದ ಜೈವಿಕ ಪ್ರತಿಕ್ರಿಯಾ ಯಂತ್ರ ಸ್ಥಾಪನೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ದೊಡ್ಡ ಪ್ರಯತ್ನವನ್ನೇ ಮಾಡಿದೆ. ಚಿನ್ನದ ಅದಿರು ದೇಶಿಯ ರೂಪದಲ್ಲಿದ್ದು, ಬೆಣಚು ಕಲ್ಲಿನ ಮೇಟ್ರಿಕ್ಸ್ ನಂತಹ ಅದಿರಿನಲ್ಲಿ ಹರಡಿ ಹೋಗಿದ್ಡು(ಫ್ರೀ ಮಿಲ್ಲಿಂಗ್ ಅದಿರು ಎಂದು ಕರೆಯಲಾಗುವ) ಸಾಂಪ್ರದಾಯಿಕ ಕ್ರಮದಲ್ಲಿ ಸೈನೈಡ್ ಸಂಗಡ ಪ್ರತಿಕ್ರಿಯಿಸಿ ಚಿನ್ನ+ಸೈನೈಡಿನ ಕರಗುವ ಸಂಯುಕ್ತ ವಸ್ತುವನ್ನಾಗಿಸುವುದು. ಚಿನ್ನದ ಅದಿರು ರಿಫ್ರ್ಯಾಕ್ಟರಿ ಸ್ವಭಾವದ್ದೆಂದು ಕಂಡುಬಂದಲ್ಲಿ ಅಂದರೆ ಪೈರೈಟ್ ಮತ್ತು ಆರ್ಸಿನೋ ಪೈರೈಟ್ ನಂತಹ ಸಲ್ಫೈಡ್ ಗಳೊಂದಿಗೆ ಜೊತೆಗೂಡಿದ್ದಾಗ, ಮುಂಚಿತವಾಗಿ ಜೈವಿಕ ಪ್ರತಿಕ್ರಿಯೆಗೊಳಪಡಿಸದೇ ಸೈನೈಡೇಷನ್ ಪ್ರಕ್ರಿಯೆಗೊಳಪಡಿಸಿದಾಗ ಚಿನ್ನದ ಉತ್ಪತ್ತಿಯು ಕೇವಲ ಶೇ.೮೦-೯೦ಕ್ಕಿಂತ ಹೆಚ್ಚು ಮಾಡಬಹುದು. ಅಜ್ಜನಹಳ್ಳಿ ಮತ್ತು ಜಿ.ಆರ್.ಹಳ್ಳಿಯಲ್ಲಿ ಸಿಗುವ ರಿಫ್ರ್ಯಾಕ್ಟರಿ ಅದಿರು ಸಂಸ್ಕರಣೆಗೆ ದೊಡ್ಡ ಪ್ರಮಾಣದ ಡೆಮಾನ್ಸ್ಟ್ರೇಟರ್ ಪ್ಲಾಂಟ್ ಆಗಿ ಪರಿವರ್ತಿಸಲು ಯೋಜನೆ ಹಾಕಿಕೊಳ್ಳಲಾಗಿದೆ

.Plant

ಇತ್ತೀಚಿನ ನವೀಕರಣ​ : 20-04-2021 12:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080